ಜೇಮ್ಸ್, ವಿಲಿಯಮ್
1842-1910. ದರ್ಶನಶಾಸ್ತ್ರದಲ್ಲಿ ವ್ಯಾವಹಾರಿಕ ಸತ್ತಾವಾದವನ್ನು (ಪ್ರಾಗ್ಮ್ಯಾಟಿಸಮ್) ರೂಪುಗೊಳಿಸಿ ಆ ದೃಷ್ಟಿಯನ್ನು ಮನಃಶಾಸ್ತ್ರದಲ್ಲಿಯೂ ತಂದ ಖ್ಯಾತ ತತ್ವe್ಞÁನಿ, ಮನಃಶಾಸ್ತ್ರಜ್ಞ. ಮನಃಶಾಸ್ತ್ರೀಯ ವೈe್ಞÁನಿಕ ಪದ್ಧತಿಯನ್ನು ಅಳವಡಿಸಿಕೊಳ್ಳುವಲ್ಲಿ ಈತನ ಪ್ರಭಾವ ವಿಪುಲವಾಗಿತ್ತು. ಈತನ ವಿದ್ಯಾಭ್ಯಾಸ ಹಾಗೂ ಕಾರ್ಯಕ್ಷೇತ್ರ ಅಂಥ ಕೆಲಸಕ್ಕೆ ಅನುಕೂಲ ಪರಿಸ್ಥಿತಿಯನ್ನೊದಗಿಸಿತು. ಜೇಮ್ಸ್ ತರುಣನಾಗಿದ್ದಾಗ ವೈದ್ಯಶಿಕ್ಷಣ ಪಡೆದ. ಹಾವರ್ಡ್ ವಿಶ್ವವಿದ್ಯಾಲಯದಿಂದ 1870ರಲ್ಲಿ ವೈದ್ಯಪದವಿಯನ್ನು ಪಡೆದು ಅದೇ ವಿಶ್ವವಿದ್ಯಾಲಯದಲ್ಲೇ ದೇಹವಿe್ಞÁನಶಾಸ್ತ್ರದ ಅಧ್ಯಾಪಕನಾಗಿಯೂ ತುಲನಾತ್ಮಕ ದೇಹರಚನಾಶಾಸ್ತ್ರದ ಉಪಪ್ರಾಧ್ಯಾಪಕನಾಗಿಯೂ ಈತ ಕೆಲಸಮಾಡಿದ್ದ. 1879-1880ರ ಸುಮಾರಿಗೆ ಇವನ ಆಸಕ್ತಿ ದೇಹವಿಜ್ಞಾನದಿಂದ ತತ್ತ್ವಶಾಸ್ತ್ರದ ಕಡೆ ಹೊರಳಿತು. 1889ರವರೆಗೂ ಆ ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರ ವಿಭಾಗಕ್ಕೆ ಮುಖ್ಯಾಧಿಕಾರಿಯಾಗಿದ್ದು, ಅಲ್ಲಿಂದ ಮುಂದೆ 1892ರವರೆಗೆ ಮನಃಶಾಸ್ತ್ರದ ಪ್ರಾಧ್ಯಾಪಕನಾಗಿಯೂ ಈತ ಕೆಲಸ ನಿರ್ವಹಿಸಿದ್ದ. ಹೀಗೆ ಈತನಿಗೆ ಮನಃಶಾಸ್ತ್ರ ಪ್ರವೇಶಕ್ಕೆ ತಕ್ಕ ಅಧಿಕಾರ ದೇಹವಿe್ಞÁನಶಾಸ್ತ್ರದಿಂದಲೂ ಪ್ರಾಣಿಶಾಸ್ತ್ರದಿಂದಲೂ ದೊರಕಿತು. ಇದು ಆ ಯುಗದ ಮನಃಶಾಸ್ತ್ರಜ್ಞರಲೆಲ್ಲ ಪ್ರಶಸ್ತವಾದ ಮನೋಧರ್ಮವನ್ನು ಇವನಿಗೆ ತಂದಿತು. ಈತ ಬರೆದ ಮನಃಶಾಸ್ತ್ರದ ನಿಯಮಗಳನ್ನು ಕುರಿತ ಉದ್ಗ್ರಂಥ ಆ ಶಾಸ್ತ್ರದ ಪ್ರಗತಿಗೆ ಬಹುಮಟ್ಟಿಗೆ ನೆರವಾಯಿತು. ಹೃದ್ಯವಾದ ಶೈಲಿಯಲ್ಲಿ ಸಿದ್ದವಾಗಿರುವ ಈ ಗ್ರಂಥವನ್ನು ಇಂದಿಗೂ ವಿದ್ಯಾರ್ಥಿಗಳು ಓದುತ್ತಾರೆ. ಪ್ರಕೃತಿಯೊಂದಿಗೆ ಅಗತ್ಯವಾದ ಹೊಂದಾಣಿಕೆಯನ್ನು ಪಡೆಯುವುದೇ ಮನುಷ್ಯನ ಕೆಲಸ ಎಂಬ ದೃಷ್ಟಿಯನ್ನು ಜೇಮ್ಸ್ ಪ್ರತಿಪಾದಿಸಿದ. ಅರಿವಿನ ಹೊಳೆ (ಸ್ಟ್ರೀಂ ಆಫ್ ಕಾನ್ಷಸ್ನೆಸ್) ಎಂಬ ಕಲ್ಪನೆ ಜೇಮ್ಸನದೇ. ಭಾವಗಳ ಅಧ್ಯಯನದಲ್ಲಿ ದೈಹಿಕಕ್ರಿಯೆಗಳ ಆದ್ಯತೆಯನ್ನು ಇವನು ನಿರೂಪಿಸಿದ ಸಮಯದಲ್ಲೇ ಸ್ವತಂತ್ರವಾಗಿ ಲಾಂಗ್ (1869-1938) ಎಂಬ ವಿe್ಞÁನಿಯೂ ನಿರೂಪಿಸಿದನಾದ್ದರಿಂದ ಈ ವಾದ ಜೇಮ್ಸ್-ಲಾಂಗ್ ವಾದ ಎಂದು ಪ್ರಸಿದ್ಧವಾಗಿದೆ. ಈ ವಾದದ ಪ್ರಖ್ಯಾತಿಗೇನೋ ಜೇಮ್ಸನೇ ಕಾರಣ. ಮಿದುಳಿನಲ್ಲಿ ನರಮಾರ್ಗಗಳ ಪಾತ್ರವನ್ನು ಅರಿತು ಚಿಂತನೆಗಳ ಸಂಯೋಗವನ್ನು ವಿವರಿಸಿದ ಕೀರ್ತಿಯೂ ಇವನದೇ. 1884ರಲ್ಲಿ ಪ್ರೇತಸಂಬಂದವಾದ ಸಂಶೋಧನೆಗಳಲ್ಲಿ ಆಸಕ್ತಿ ತಳೆದು ಅಮೆರಿಕನ್ ಸೊಸೈಟಿ ಫಾರ್ ಸೈಕಿಕಲ್ ರಿಸರ್ಚ್ ಎಂಬ ಸಂಸ್ಥೆಯನ್ನು ಈತ ಆರಂಭಿಸಿದ. ಸುಪ್ತಚೇತನದ ವಿಚಾರವಾಗಿಯೂ ಇವನಿಗೆ ತುಂಬ ಶ್ರದ್ಧೆಯಿತ್ತು. ತನ್ನ ಕಡೆಗಾಲದಲ್ಲಿ ಈತನಿಗೆ ಆಧ್ಯಾತ್ಮಚಿಂತನೆಯ ಹಂಬಲ ಅತಿಯಾಯಿತಾಗಿ ಧಾರ್ಮಿಕ ಜೀವನದ ದೈವಿಕ ಅನುಭವದ ವಿಶ್ಲೇಷಣೆ ಮಾಡಹತ್ತಿದ. ಇದರ ಫಲವಾಗಿ ಧಾರ್ಮಿಕ ಜೀವನದ ದೈವಿಕ ಅನುಭವದ ಹಲವು ಪ್ರಕಾರಗಳು (1902) ಎಂಬ ಗ್ರಂಥ ಸಿದ್ಧವಾಯಿತು. ವಿಶ್ವವಿಖ್ಯಾತವಾದ ಈ ಗ್ರಂಥ ಈತ ನೀಡಿದ ಗಿಫೋರ್ಡ್ ಉಪನ್ಯಾಸಗಳ ಸಂಕಲನ. ಹಿಬರ್ಟ್ ಉಪನ್ಯಾಸಗಳ ಸಂಕಲನವೇ ಎ ಪ್ಲೂರಲಿಸ್ಟಿಕ್ ಯೂನಿವರ್ಸ್ (1908) ಎಂಬ ಗ್ರಂಥ. ದಿ ವಿಲ್ ಟು ಬಿಲೀವ್ ಅಂಡ್ ಅದರ್ ಎಸ್ಸೇಸ್ (1897) ಮತ್ತು ಪ್ರಾಗ್ಮ್ಯಾಟಿಸಮ್ (1907)-ಇವು ಈತನ ಇತರ ಎರಡು ಮುಖ್ಯ ಕೃತಿಗಳು.

	ಜೇಮ್ಸ್ ಪ್ರತಿಪಾದಿಸಿದ ತತ್ತ್ವವನ್ನು ಅನುಭವೈಕವಾದ (ಎಂಪಿರಿಸಿಸು) ಹಾಗೂ ಇಚ್ಛಾಪ್ರಧಾನವಾದಗಳ (ವಾಲಂಟರಿಸಂ) ಹೊಂದಾಣಿಕೆ ಎಂದು ವರ್ಣಿಸಲಾಗಿದೆ.
(ಎಸ್.ಕೆ.ಆರ್.; ಎಂ.ಸಿ.ಎಸ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ